Friday, January 22, 2021

Dr.K R Sriharsha Abhinandana Samarambha 27-01-2021 ಡಾ.ಕೆ.ಆರ್.ಶ್ರೀಹರ್ಷ ರವರ ಅಭಿನಂದನಾ ಸಮಾರಂಭ

ಕಾರ್ಯಕ್ರಮದ ಪತ್ರಿಕಾ ವರದಿಗಳು










ಕಾರ್ಯಕ್ರಮದ ಫೋಟೋಗಳು

ಡಾ.ಕೆ.ಆರ್.ಶ್ರೀಹರ್ಷ ಅವರಿಗೆ ಅಭಿನಂದನೆ. ಚಿತ್ರದಲ್ಲಿ ಹಿರೇಮಠದ ಅಧ್ಯಕ್ಷರಾದ ಪೂಜ್ಯ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು (ಮಧ್ಯದಲ್ಲಿ), ತುಮಕೂರು ವಿ.ವಿ. ಕುಲಪತಿಗಳಾದ ಕರ್ನಲ್ ಪ್ರೊ. ವೈ.ಎಸ್.ಸಿದ್ದೇಗೌಡರು(ಬಲಬದಿ), ಜಿಲ್ಲಾ ಬಿಜೆಪಿ ಅಧ್ಯಕ್ಷರೂ, ಮಾಜಿ ಶಾಸಕರೂ ಆದ ಶ್ರೀ ಬಿ.ಸುರೇಶ್ ಗೌಡರು (ಎಡಬದಿ), ಸರಸ್ ಅಧ್ಯಕ್ಷ ಶ್ರೀ ಆರ್.ವಿಶ್ವನಾಥನ್, ಕಾರ್ಯದರ್ಶಿ ಶ್ರೀ ಆರ್.ಎಸ್.ಅಯ್ಯರ್, ಶ್ರೀ ಎಚ್.ಕೆ. ರಮೇಶ್, ಶ್ರೀ ಸಂತೋಷ್ ಕುಮಾರ್ ಅವರನ್ನು ಕಾಣಬಹುದು. ************************************************************************




ತುಮಕೂರು ವಿ.ವಿ.ಕುಲಪತಿಗಳಾದ ಕರ್ನಲ್ ಪ್ರೊ. ವೈ.ಎಸ್.ಸಿದ್ದೇಗೌಡರವರು ಮಾತನಾಡುತ್ತಿರುವುದು.
------------------------------------------------------------------------------------------------------------


ಹಿರೇಮಠ ಅಧ್ಯಕ್ಷರಾದ ಪ.ಪೂ. ಡಾ.ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳ ಆಶೀರ್ವಚನ

-----------------------------------------------------------------------------------------------------------------------

ಜಿಲ್ಲಾ ಬಿಜೆಪಿ ಅಧ್ಯಕ್ಷರೂ, ಮಾಜಿ ಶಾಸಕರೂ ಆದ ಶ್ರೀ ಬಿ.ಸುರೇಶ್ ಗೌಡರವರು ಮಾತನಾಡುತ್ತಿರುವುದು.
_________________________________________________________________________


ಅಭಿನಂದನೆ ಸ್ವೀಕರಿಸಿದ ಡಾ.ಕೆ.ಆರ್.ಶ್ರೀಹರ್ಷ ರವರು ಮಾತನಾಡುತ್ತಿರುವುದು.
--------------------------------------------------------------------------------------------------------------------------


ಪೂಜ್ಯ ಸ್ವಾಮೀಜಿಯವರಿಗೆ ಗೌರವಾರ್ಪಣೆ
--------------------------------------------------------------

ಶ್ರೀ ಬಿ.ಸುರೇಶ್ ಗೌಡರಿಗೆ ಗೌರವ ಸಲ್ಲಿಕೆ.... ಶ್ರೀ ಆರ್.ವಿಶ್ವನಾಥನ್ ಮತ್ತು ಶ್ರೀ ಸಂತೋಷ್ ಕುಮಾರ್ ಅವರಿಂದ.
-------------------------------------------------------------

ಇಂಜಿನಿಯರ್ ಶ್ರೀ ವಿ.ವಿವೇಕ್ (ಬಲತುದಿ) ಮತ್ತು ಉದ್ಯಮಿ ಶ್ರೀ ಸಂತೋಷ್ ಕುಮಾರ್ (ಎಡತುದಿ) ಅವರಿಂದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ವೈ.ಎಸ್.ಸಿದ್ದೇಗೌಡರಿಗೆ ಗೌರವ ಸಲ್ಲಿಕೆ.
----------------------------------------------------




ಕಾರ್ಯದರ್ಶಿ ಶ್ರೀ ಆರ್.ಎಸ್.ಅಯ್ಯರ್ ರವರಿಂದ ಕಾರ್ಯಕ್ರಮ ನಿರೂಪಣೆ.
--------------------------------------------------


ಸರಸ್ ಅಧ್ಯಕ್ಷರಾದ ಶ್ರೀ ಆರ್.ವಿಶ್ವನಾಥನ್ ಅವರಿಂದ ಸ್ವಾಗತ
-------------------------------------------------------------------------------------------------


ನಂದಿನಿ ಸೌಹಾರ್ದ ಪತ್ತಿನ ಸಹಕಾರಿಯ ಅಧ್ಯಕ್ಷರಾದ ಶ್ರೀ ಹೆಚ್.ಕೆ.ರಮೇಶ್ ಅವರಿಂದ ವಂದನಾರ್ಪಣೆ
-------------------------------------------------------------



ಸಭಿಕ ವೃಂದದಲ್ಲಿ ತುಮಕೂರು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಶ್ರೀ ಸಿ.ಎನ್.ರಮೇಶ್, ಇಂಜಿನಿಯರ್ ಶ್ರೀ ರಾಮಶೇಷ, ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್, ಶ್ರೀ ಹೆಚ್.ಎನ್.ಸತೀಶ್, ಇಂಜಿನಿಯರ್ ವಿ.ವಿವೇಕ್, ಇಂಜಿನಿಯರ್ ಶ್ರೀ ಕೆ.ಆರ್.ಅಶೋಕ್ ,  ಚೆನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಉಪನ್ಯಾಸಕರಾದ ಶ್ರೀ ಹರ್ಷಿತ್, ಶ್ರೀದೇವಿ ಪಾಲಿಟೆಕ್ನಿಕ್ ಪ್ರಾಚಾರ್ಯರಾದ ಶ್ರೀ ಮಲ್ಲೇಶ್, ಖ್ಯಾತ ನೇತ್ರ ತಜ್ಞರಾದ ಡಾ.ಮಹದೇವಪ್ಪ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಶ್ರೀ ಕೆ.ಬಾಲಾಜಿ, ಶ್ರೀಮತಿ ಸುಮ ಸುರೇಶ್, ಶ್ರೀಮತಿ ಭಾರತಿ ಶ್ರೀನಿವಾಸ್, ಉದ್ಯಮಿ ಶ್ರೀ ವೆಂಕಟಾಚಲಪತಿ ಶ್ರೇಷ್ಠಿ, ನಿವೃತ್ತ ಅಧಿಕಾರಿ ಶ್ರೀ ಬಿ.ವಿ.ದಾಸರಾಜು ರವರು ಮೊದಲಾದ  ಗಣ್ಯರನ್ನು ಕಾಣಬಹುದು.
------------------------------------------









 

Wednesday, January 8, 2020

Ward Committe and RTI workshop, 05-01-2020 ವಾರ್ಡ್ ಸಮಿತಿ ಮತ್ತು ಮಾಹಿತಿಹಕ್ಕು ಕಾರ್ಯಾಗಾರ













RTI workshop Tumkur- Date 12-02-2017 Saras Foundation Programme - ಮಾಹಿತಿ ಹಕ್ಕು ಕಾರ್ಯಾಗಾರ

ತುಮಕೂರು ನಗರದ  ಎಂ.ಜಿ.ರಸ್ತೆಯ "ಹಟ್ ಹೋಟೆಲ್" ಸಭಾಂಗಣದಲ್ಲಿ ದಿನಾಂಕ 12-02-2017 ರಂದು ಸರಸ್ ಫೌಂಡೇಷನ್ ಟ್ರಸ್ಟ್ ವತಿಯಿಂದ  "ಮಾಹಿತಿ ಹಕ್ಕು ಕಾಯ್ದೆ ಕುರಿತ ಕಾರ್ಯಾಗಾರ"  ಏರ್ಪಟ್ಟಿತ್ತು. ಬೆಂಗಳೂರಿನ ಕ್ರಿಯೇಟ್ ಸಂಸ್ಥೆ ಮುಖ್ಯಸ್ಥರೂ, ಮಾಹಿತಿ ಹಕ್ಕು ಕಾಯ್ದೆಯ ಪರಿಣತರೂ ಆದ ಶ್ರೀ ವೈ.ಜಿ.ಮುರಳೀಧರನ್ ಅವರು ಈ ಕಾರ್ಯಾಗಾರ ನಡೆಸಿಕೊಟ್ಟರು. ತುಮಕೂರಿನ ಅನೇಕ ಆರ್.ಟಿ.ಐ. ಅರ್ಜಿಯ ಹೋರಾಟಗಾರರು ಪಾಲ್ಗೊಂಡಿದ್ದರು.

Sri R.Vishwanathan, Sri Y.G.Muralidharan and Sri G.K.Srinivas



R.S.Iyer talking...





Participants of the workshop



G.K.Srinivas talking



 






Tuesday, July 28, 2009

Friday, July 10, 2009


Date: 15-06-2009
‘ಬರಹದ ರೂವಾರಿಗೆ ನಗರದಲ್ಲಿ ಆತ್ಮೀಯ ಸನ್ಮಾನ
ಕನ್ನಡದಲ್ಲಿ ಅನ್ವಯಿಕ ತಂತ್ರಾಂಶ ಅಗತ್ಯ- ಶೇಷಾದ್ರಿವಾಸು
ತುಮಕೂರು:- ಕನ್ನಡ ಭಾಷಾ ತಂತ್ರಾಂಶ (ಸಾಫ್ಟ್‌ವೇರ್)ಗಳಲ್ಲಿ ಬಹುತೇಕ ತಾಂತ್ರಿಕ ಸಮಸ್ಯೆಗಳು ಬಗೆಹರಿದಿವೆ. ಆದರೆ ಇಂಗ್ಲಿಷ್ ಭಾಷಾ ತಂತ್ರಾಂಶಗಳಲ್ಲಿರುವಂತೆ ಕನ್ನಡದಲ್ಲೂ ವಿವಿಧ ರೀತಿಯ ಅನ್ವಯಿಕ ತಂತ್ರಾಂಶ (ಅಪ್ಲಿಕೇಷನ್ಸ್) ಗಳನ್ನು ರೂಪಿಸಬೇಕಾದ ಅಗತ್ಯತೆ ಇದೆ ಎಂದು ಉಚಿತ ಕನ್ನಡ ತಂತ್ರಾಂಶ ‘ಬರಹದ ರೂವಾರಿಯಾದ ಅಮೇರಿಕಾದ ಶೇಷಾದ್ರಿವಾಸು ಚಂದ್ರಶೇಖರನ್ ಅವರು ಅಭಿಪ್ರಾಯಪಟ್ಟರು.
ಅವರು ಜೂನ್ ೧೫ ರಂದು ಸೋಮವಾರ ಬೆಳಿಗ್ಗೆ ತುಮಕೂರು ನಗರದ ಸಿಟ್ರಿಸ್ ವಿದ್ಯಾಸಂಸ್ಥೆಯಲ್ಲಿ ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆ ಮತ್ತು ಕನ್ನಡ ಸಾಹಿತ್ಯ ಡಾಟ್ ಕಾಮ್ ಬೆಂಬಲಿಗರ ಬಳಗದ ಸಂಯುಕ್ತಾಶ್ರಯದಲ್ಲಿ ನಡೆದ ಸಮಾರಂಭದಲ್ಲಿ ತಮಗೆ ನೀಡಿದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡುತ್ತಿದ್ದರು. ಕನ್ನಡದಲ್ಲಿ ಇಂದು ತಂತ್ರಾಂಶಗಳು ಲಭ್ಯವಿವೆ. ಅವೆಲ್ಲವೂ ಇ-ಮೇಲ್ ಮಾಡಲು, ದಾಖಲಾತಿ ಸಂಗ್ರಹ ಇತ್ಯಾದಿಗಷ್ಟೇ ಸೀಮಿತವಾಗಿವೆ. ಆದರೆ ಅಷ್ಟೇ ಸಾಲದು. ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಎಲ್ಲ ಮಾಹಿತಿಯೂ ಕನ್ನಡದಲ್ಲೇ ಲಭ್ಯವಾಗುವಂತಾಗಬೇಕು. ಅದಕ್ಕಾಗಿ ಅನ್ವಯಿಕ ತಂತ್ರಾಂಶಗಳು ರೂಪುಗೊಳ್ಳಬೇಕು ಎಂದು ಅವರು ಹೇಳಿದರು.
೧೨ ಭಾಷೆಗಳಲ್ಲಿ ಬಳಕೆ:- ‘ಬರಹ ತಂತ್ರಾಂಶವು ಇಂದು ಕನ್ನಡ, ದೇವನಾಗರಿ ಸೇರಿದಂತೆ ಒಂಭತ್ತು ಭಾರತೀಯ ಲಿಪಿಗಳಲ್ಲಿ ಲಭ್ಯವಿದ್ದು, ಹನ್ನೆರಡು ಭಾರತೀಯ ಭಾಷೆಗಳಲ್ಲಿ ಬಳಕೆಯಲ್ಲಿದೆ. ಇದರಿಂದ ಒಂದು ಭಾಷೆಯಿಂದ ಮತ್ತೊಂದು ಭಾಷೆಯ ಲಿಪ್ಯಂತರಕ್ಕೆ ಸಹಾಯಕವಾಗಿದೆ. ಅಲ್ಲದೆ ಅನೇಕ ಸುಧಾರಣೆಗಳ ಮೂಲಕ ಇಂದು ‘ಬರಹ-೮ ತಂತ್ರಾಂಶ ಸಿದ್ಧವಾಗಿದೆ. ಬರಹದಿಂದ ಬ್ರೈಲ್ ಲಿಪಿಗೂ ಪರಿವರ್ತನೆ ಮಾಡಬಹುದಾಗಿದೆ. ಪ್ರೊ ಜಿ.ವೆಂಕಟಸುಬ್ಬಯ್ಯ ಅವರ ಕನ್ನಡ ನಿಘಂಟನ್ನು ಅಳವಡಿಸಲಾಗಿದೆ. ಸದ್ಯದಲ್ಲೇ ಶಂಕರ ಭಟ್ ಅವರು ರೂಪಿಸಿರುವ ಪರ್ಯಾಯ ಕನ್ನಡ ಪದಗಳ ಸಂಗ್ರಹವನ್ನೂ ಸೇರಿಸುವ ಉದ್ದೇಶವಿದೆ ಎಂದು ಶೇಷಾದ್ರಿವಾಸು ಹೇಳಿದರು. ಲಾಭಕ್ಕಲ್ಲ, ಖುಷಿಗೆ:- ಅಮೇರಿಕದಂತಹ ದೇಶದಲ್ಲಿ ಕುಳಿತು ‘ಬರಹ ತಂತ್ರಾಂಶವನ್ನು ತಾವು ಸೃಷ್ಟಿಸಿದ್ದು ಯಾವುದೇ ಲಾಭದ ಉದ್ದೇಶದಿಂದಲ್ಲ. ಕೇವಲ ಸ್ವಂತ ಬಳಕೆಯ ಖುಷಿಯಿಂದ ಎಂದು ಹೇಳಿದ ಅವರು, ಬರಹ ರೂಪುಗೊಂಡಾಗ ಖುಷಿಯಾಯಿತು. ಅದು ಹಲವರ ಗಮನಕ್ಕೆ ಬಂದಾಗ ಅನೇಕ ಗೆಳೆಯರು ಸಿಕ್ಕಿದರು. ಅಲ್ಲದೆ ಬಿಡುವಿನ ವೇಳೆಯನ್ನು ಸದ್ವಿನಿಯೋಗಪಡಿಸಿಕೊಳ್ಳಲು ಬರಹ ತಂತ್ರಾಂಶದ ಸಂಶೋಧನೆ ನೆರವಾಯಿತು. ಅದೇ ಬಹುದೊಡ್ಡ ಖುಷಿಯ ಸಂಗತಿ ಎಂದರು. ಜೀವನೋಪಾಯಕ್ಕೆ ಒಂದು ಉದ್ಯೋಗವಿದೆ. ಅಷ್ಟು ಸಾಕು. ಆದರೆ ಹವ್ಯಾಸವಾಗಿ ನಡೆಸಿದ ಪ್ರಯೋಗವು ‘ಬರಹ ತಂತ್ರಾಂಶದ ರೂಪ ಪಡೆಯಿತು. ಆ ಪ್ರಯೋಗ ಯಶಸ್ವಿಯಾದ್ದರಿಂದ ಅದನ್ನು ಉಚಿತವಾಗಿ ಜನಬಳಕೆಗೆ ಇಂಟರ್‌ನೆಟ್‌ನಲ್ಲಿ ಮುಕ್ತ ಅವಕಾಶ ನೀಡಲಾಯಿತು. ಇಂದು ಪ್ರತಿ ತಿಂಗಳೂ ಸುಮಾರು ೨೦ ಸಾವಿರ ಜನರು ‘ಬರಹ ತಂತ್ರಾಂಶವನ್ನು ಡೌನ್ ಲೋಡ್ ಮಾಡಿಕೊಳ್ಳುತ್ತಿದ್ದು, ಈವರೆಗೆ ಲಕ್ಷಾಂತರ ಜನರು ಇದರ ಉಪಯೋಗ ಪಡೆಯುತ್ತಿದ್ದಾರೆ. ಅನೇಕರು ಸ್ವಯಂಪ್ರೇರಣೆಯಿಂದ ಧನಸಹಾಯಕ್ಕೆ ಮುಂದೆ ಬಂದಾಗ, ಆಸಕ್ತಿಯಿರುವವರು ಬೆಂಗಳೂರಿನಲ್ಲಿ ಕನ್ನಡ ಕೆಲಸಕ್ಕೆ ಬದ್ಧವಾಗಿರುವ ಅ.ನ.ಕೃ. ಪ್ರತಿಷ್ಠಾನಕ್ಕೆ ನೆರವು ನೀಡಬಹುದೆಂದು ಮಾತ್ರ ಮನವಿ ಮಾಡಲಾಗಿದೆ ಎಂದು ಹೇಳಿದರು.
ಗೌರವ ಡಾಕ್ಟರೇಟ್ ಕೊಡಲಿ: ದೂರದ ಅಮೇರಿಕದಲ್ಲಿ ಕುಳಿತು ಮೌನವಾಗಿ ಹಾಗೂ ನಿಸ್ವಾರ್ಥತೆಯಿಂದ ಕನ್ನಡವನ್ನು ಉಳಿಸಿ-ಬೆಳೆಸುವ ಕೆಲಸ ಮಾಡಿರುವ, ತುಮಕೂರಿನೊಂದಿಗೆ ನಿಕಟ ಸಂಪರ್ಕವಿರುವ ಶೇಷಾದ್ರಿವಾಸು ಅವರಿಗೆ ತುಮಕೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಬೇಕಾಗಿದೆ ಎಂದು ಖ್ಯಾತ ಪರಿಸರವಾದಿ ಟಿ.ವಿ.ಎನ್. ಮೂರ್ತಿ ಅವರು ಅಭಿಪ್ರಾಯಪಟ್ಟರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಿ.ಐ.ಟಿ. ವಿದ್ಯಾಸಂಸ್ಥೆಯ ಕಾರ್ಯದರ್ಶಿ ಜಿ.ಬಿ.ಜ್ಯೋತಿಗಣೇಶ್ ಅವರು ಇದೇ ಸಂದರ್ಭದಲ್ಲಿ ಶೇಷಾದ್ರಿವಾಸು ಅವರಿಗೆ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು. ವಿಪ್ರ ಜಾಗೃತಿ ವೇದಿಕೆ ಅಧ್ಯಕ್ಷ ಜಿ.ಕೆ. ಶ್ರೀನಿವಾಸ್ ವೇದಿಕೆ ಪರವಾಗಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಸರಸ್ ವ್ಯವಸ್ಥಾಪಕ ಆರ್.ವಿಶ್ವನಾಥನ್ ವೇದಿಕೆಯಲ್ಲಿದ್ದರು. ಕೋಟೆ ನಾಗಭೂಷಣ್ ಸ್ವಾಗತಿಸಿ, ವಂದಿಸಿದರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವಿ.ಎಸ್.ರಾಮಚಂದ್ರನ್, ಡಿ.ಡಿ.ಪಿ.ಐ. ಪ್ರಭಾಕರ್, ಮಾಜಿ ನಗರ ಸಭಾಧ್ಯಕ್ಷ ಆರ್.ಎನ್.ಸತ್ಯನಾರಾಯಣ, ಕೈಗರಿಕೋದ್ಯಮಿ ಮಾಲತಿ ಸತ್ಯನಾರಾಯಣ, ಮಾಜಿ ನಗರ ಸಭಾ ಸದಸ್ಯರಾದ ಪಿ.ಎಸ್. ರಮೇಶ್, ಡಿ.ಆರ್. ಬಸವರಾಜು, ಪ್ರೊ ಕರುಣಾಕರ್, ಪ್ರೊ ಎನ್.ಪಿ.ರವೀಂದ್ರನಾಥ್, ಡಾ ನಾಗಭೂಷಣ್, ಇಂಜಿನಿಯರ್ ರಾಮಶೇಷು, ಆಡಿಟರ್ ಪ್ರಕಾಶ್, ಪತ್ರಕರ್ತ ಆರ್.ಎಸ್.ಅಯ್ಯರ್, ಕೆ.ದೊರೈರಾಜ್ ಸೇರಿದಂತೆ ನಗರದ ಹಲವು ಗಣ್ಯರು ಭಾಗವಹಿಸಿದ್ದರು.

Saturday, December 6, 2008


14.07.2008

ಆರೋಗ್ಯವೃದ್ಧಿಗೆ ಪ್ರಾಣಿಕ್ ಹೀಲಿಂಗ್ ಸಹಕಾರಿ

ತುಮಕೂರು: ವ್ಯಕ್ತಿಯು ತನ್ನ ಸ್ವಾಸ್ಥ್ಯ ರಕ್ಷಣೆಯೊಂದಿಗೆ ತನ್ನಲ್ಲಡಗಿರುವ ಸಾಮರ್ಥ್ಯವನ್ನು ವೃದ್ಧಿಪಡಿಸಿಕೊಳ್ಳಲು ಸಹಾ ಪ್ರಾಣಿಕ್ ಹೀಲಿಂಗ್ ಚಿಕಿತ್ಸಾ ಪದ್ಧತಿಯು ಮಹತ್ವದ ಪರಿಣಾಮ ಬೀರುವುದು ಎಂದು ಮೈಸೂರಿನ ಯೋಗವಿದ್ಯಾ ಪ್ರಾಣ ಚಿಕಿತ್ಸಕಿ ಸಿ.ಆರ್.ಜಯಶ್ರೀ ಅವರು ಅಭಿಪ್ರಾಯಪಟ್ಟರು. ಅವರು ದಿನಾಂಕ: ೧೪.೦೭.೨೦೦೮ ರಂದು ತುಮಕೂರು ನಗರದ ಪ್ರಹ್ಲಾದರಾವ್ ಪಾರ್ಕ್‌ನಲ್ಲಿ ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆಯ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ “ಪ್ರಾಣಿಕ್ ಹೀಲಿಂಗ್ ಚಿಕಿತ್ಸಾ ಪದ್ಧತಿಯ ಬಗ್ಗೆ ವಿಶೇಷ ಉಪನ್ಯಾಸ ನೀಡುತ್ತಿದ್ದರು. ಪ್ರಾಣಿಕ್ ಹೀಲಿಂಗ್ ಇತರೆ ಯಾವುದೇ ವೈದ್ಯ ಪದ್ಧತಿಗೆ ವಿರುದ್ಧವಾದುದಲ್ಲ. ಇದು ಎಲ್ಲ ಚಿಕಿತ್ಸೆಗಳಿಗೂ ಪೂರಕವಾದುದು ಹಾಗೂ ಮುಂಜಾಗ್ರತಾ ಕ್ರಮವಾಗಿದೆ. ಯಾವುದೇ ಔಷಧಿಯಿಲ್ಲದೆ ರೋಗಗಳನ್ನು ಗುಣಪಡಿಸಿಕೊಳ್ಳಲು ಸಹಕಾರಿಯಾದ ಒಂದು ವಿಧಾನವಾಗಿ ಇದು ಜನಪ್ರಿಯವಾಗಿದೆ. ಇಂದು ಇದನ್ನು ಮನೆ-ಮನೆಗಳಲ್ಲೂ, ಹಿರಿಯರು-ಕಿರಿಯರು, ಸ್ತ್ರೀ-ಪುರುಷರೆಂಬ ಭೇದವಿಲ್ಲದಂತೆ ಎಲ್ಲರೂ ಕಲಿಯುವ ಅಗತ್ಯವಿದೆ. ಇದರ ಬಗ್ಗೆ ಅರಿವಿದ್ದರೆ ಅದೆಷ್ಟೋ ರೋಗಗಳಿಗೆ ಸುಲಭವಾಗಿ ನಿವಾರಣೆಯನ್ನು ಕಾಣಬಹುದು ಎಂದು ಉದಾಹರಣೆಗಳೊಂದಿಗೆ ಹೇಳಿದರು. ಮನುಷ್ಯನ ಭೌತಿಕ ಶರೀರದ ಹೊರಭಾಗದಲ್ಲಿ ಕವಚದೋಪಾದಿಯಲ್ಲಿ ಸೂಕ್ಷ್ಮ ಶರೀರವೂ ಇದೆ. ಈ ಸೂಕ್ಷ್ಮ ಶರೀರದಲ್ಲಿ ಉಂಟಾಗುವ ಲೋಪದೋಷಗಳಿಂದಲೇ ಭೌತಿಕ ಶರೀರದಲ್ಲಿ ರೋಗಗಳು ಕಾಣಿಸಿಕೊಳ್ಳುತ್ತವೆ. ಇಂತಹ ಲೋಪಗಳನ್ನು ಸರಿಪಡಿಸುವುದೇ ಪ್ರಾಣಿಕ್ ಹೀಲಿಂಗ್‌ನ ವೈಶಿಷ್ಟ್ಯವಾಗಿದೆ. ಇದೇನೂ ಹೊಸದಲ್ಲ. ಇದು ಭಾರತದ ಪ್ರಾಚೀನ ವಿದ್ಯೆಗಳಲ್ಲೊಂದಾಗಿದೆ. ಮನುಷ್ಯನ ಶರೀರವು ಅನ್ನಮಯ, ಪ್ರಾಣಮಯ ಹಾಗೂ ವಿಜ್ಞಾನಮಯ ಕೋಶಗಳಿಂದ ಕೂಡಿದೆಯೆಂದು ಋಗ್ವೇದದಲ್ಲಿ ವರ್ಣಿಸಿರುವುದನ್ನು ಕಾಣಬಹುದು. ಫಿಲಿಫೈನ್ಸ್‌ನ ರಾಸಾಯನಿಕ ಶಾಸ್ತ್ರಜ್ಞ ಮಾಸ್ಟರ್ ಚೋಕೋಕ್ ಸುಯಿ ಅವರು ಇದರ ಮಹತ್ವ ಅರಿತು, ಆಳವಾಗಿ ಸಂಶೋಧನೆ ಕೈಗೊಂಡು “ಪ್ರಾಣಿಕ್ ಹೀಲಿಂಗ್ ಎಂಬ ಹೆಸರಿನಿಂದ ಇಡೀ ಜಗತ್ತಿಗೆ ಪರಿಚಯಿಸಿದ್ದಾರೆ. ಅನೇಕ ಕಡೆಗಳಲ್ಲಿ ವೈದ್ಯರು ಸಹಾ ಇದನ್ನು ಕಲಿತು ಪ್ರಯೋಗಿಸುತ್ತಿದ್ದಾರೆ. ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆ ಮತ್ತು ಚೆನ್ನೈನ ಅಪೋಲೋ ಆಸ್ಪತ್ರೆಗಳಲ್ಲೂ “ಪ್ರಾಣಿಕ್ ಹೀಲಿಂಗ್ ಚಿಕಿತ್ಸೆಯ ಪ್ರತ್ಯೇಕ ವಿಭಾಗವಿರುವುದು ಇದರ ಮಹತ್ವಕ್ಕೆ ಸಾಕ್ಷಿಯಾಗಿದೆ ಎಂದು ವಿವರಿಸಿದರು. ರೋಚಕ ಪ್ರಾತ್ಯಕ್ಷತೆ: ಇದೇ ಸಂದರ್ಭದಲ್ಲಿ ಜಯಶ್ರೀ ಮತ್ತು ಸಂಗಡಿಗರು “ಪ್ರಾಣಿಕ್ ಹೀಲಿಂಗ್ನ ಪ್ರಾತ್ಯಕ್ಷತೆಯನ್ನು ನಡೆಸಿಕೊಟ್ಟರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ವಿ.ಮಹದೇವಯ್ಯ ಸೇರಿದಂತೆ ಅನೇಕ ಸಭಿಕರು ವೇದಿಕೆಯಲ್ಲೇ ಚಿಕಿತ್ಸೆಗೆ ಒಳಗಾಗಿ, ದೀರ್ಘಕಾಲೀನ ನೋವಿಗೆ ಸ್ಥಳದಲ್ಲೇ ನಿವಾರಣೆಯ ರೋಚಕ ಅನುಭವದಿಂದ ಆನಂದಿಸಿದರು. ನಂತರ ಸಿ.ವಿ.ಮಹದೇವಯ್ಯ ಮತ್ತು ಮುಖ್ಯ ಅತಿಥಿ ಕೆನರಾ ಬ್ಯಾಂಕ್ ಸೋಮೇಶ್ವರ ಪುರಂ ಶಾಖಾ ವ್ಯವಸ್ಥಾಪಕ ಕೆ.ಜಿ. ನಂಜುಂಡೇಶ್ವರ್ ಅವರು ಮಾತನಾಡುತ್ತಾ, ಭಾರತದ ಅನೇಕ ಪ್ರಾಚೀನ ವಿದ್ಯೆಗಳು ಮನುಷ್ಯನ ದೇಹಾರೋಗ್ಯ ಕಾಪಾಡಲು ಸಹಕಾರಿಯಾಗಿದ್ದು, ಅದರಲ್ಲಿ ಪ್ರಾಣಿಕ್ ಹೀಲಿಂಗ್ ಸಹಾ ಒಂದಾಗಿದೆ. ಇಂದಿನ ವಾತಾವರಣದಲ್ಲಿ ಎಲ್ಲರೂ ಇದನ್ನು ಕಲಿಯಬೇಕಾಗಿದೆ ಎಂದರು. ಸರಸ್ ಸಂಸ್ಥೆಯ ವ್ಯವಸ್ಥಾಪಕ ಆರ್.ವಿಶ್ವನಾಥನ್ ಸ್ವಾಗತಿಸಿದರು. ಪತ್ರಕರ್ತ ಆರ್.ಎಸ್.ಅಯ್ಯರ್ ವಂದಿಸಿದರು

Friday, December 5, 2008


Dated 22-09-2007
ಮತದಾರರನ್ನು ಜಾಗೃತಿಗೊಳಿಸಲು ಸರಸ್ ದಿಂದ ಕರಪತ್ರ ಬಿಡುಗಡೆ
ತುಮಕೂರು: ನಗರಸಭೆ ಚುನಾವಣೆಯಲ್ಲಿ ಮತದಾರರನ್ನು ಜಾಗೃತಿಗೊಳಿಸಲು ತುಮಕೂರಿನ ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆ ಪ್ರಕಟಿಸಿರುವ ವಿಶಿಷ್ಟ ಆಲೋಚನೆಗೆ ಪ್ರಚೋದಿಸುವಂತಹ ಕರಪತ್ರವನ್ನು ನಗರಸಭೆಯ ಕಾರ್ಯಸ್ಥಾನವಾದ ಶ್ರೀ ಕೃಷ್ಣರಾಜೇಂದ್ರ ಪುರಭವನದ ಮುಂದೆ ದಿನಾಂಕ : ೨೨-೦೯-೨೦೦೭ ರಂದು ನಡೆದ ಸಮಾರಂಭದಲ್ಲಿ ಇಬ್ಬರು ಶ್ರೀಸಾಮಾನ್ಯ ವ್ಯಕ್ತಿಗಳಿಂದ ಬಿಡುಗಡೆಗೊಳಿಸುವ ಮೂಲಕ ಜನ ಜಾಗೃತಿಗೆ ಅರ್ಥಪೂರ್ಣ ಚಾಲನೆ ನೀಡಲಾಯಿತು. ಮತದಾರರು ಜಾಗೃತರಾಗಬೇಕು. ತಪ್ಪದೇ ಮತಚಲಾಯಿಸಬೇಕು. ಆಸೆ ಆಮಿಷಗಳಿಗೆ ಬಲಿಯಾಗದೆ ಯೋಗ್ಯರನ್ನು ಚುನಾಯಿಸಬೇಕು ಎಂಬ ಆಶಯ ಹೊತ್ತಿರುವ ಈ ಕರಪತ್ರವನ್ನು ಆಟೋ ಚಾಲಕರಾದ ಇಂತಿಯಾಜ್ ಪಾಷ ಮತ್ತು ಹಮಾಲಿ ಕೆಲಸ ಮಾಡುವ ಕಾಶಿ ಬಿಡುಗಡೆಗೊಳಿಸಿ, ಮತದಾತನಾದ ಶ್ರೀಸಾಮಾನ್ಯನಿಗಿರುವ ಮಹತ್ವವನ್ನು ಸಾಂಕೇತಿಕವಾಗಿ ಪ್ರತಿಬಿಂಬಿಸಿದರು. ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆಯ ವ್ಯವಸ್ಥಾಪಕ ಆರ್.ವಿಶ್ವನಾಥನ್ ಈ ಕರಪತ್ರದ ಉದ್ದೇಶವನ್ನು ವಿವರಿಸಿದರು. ಉದ್ಯಮಿ ಗೌ.ತಿ.ರಂಗನಾಥ್, ಪತ್ರಕರ್ತ ಆರ್.ಎಸ್.ಅಯ್ಯರ್, ಗುತ್ತಿಗೆದಾರರಾದ ಎಚ್.ಎನ್.ಸತೀಶ್ ಮತ್ತು ಬಿ.ಎಸ್.ಪ್ರಕಾಶ್ ಮೊದಲಾದ ಗಣ್ಯ ನಾಗರಿಕರು ಈ ಸಂದರ್ಭದಲ್ಲಿ ಹಾಜರಿದ್ದರು. ವಕೀಲ ಎಸ್.ರಮೇಶ್ ಮಾತನಾಡಿ, ಇದೊಂದು ಅರ್ಥಪೂರ್ಣ ಹಾಗೂ ಅಪೂರ್ವ ಕಾರ್ಯಕ್ರಮವಾಗಿದ್ದು, ಶ್ರೀಸಾಮಾನ್ಯ ವ್ಯಕ್ತಿಗಳೇ ಈ ಕಾರ್ಯಕ್ರಮದಲ್ಲಿ ಗಣ್ಯರೆನಿಸಿದ್ದಾರೆ. ಇದು ನೈಜ ಪ್ರಜಾಪ್ರಭುತ್ವದ ಆಶಯವಾಗಿದೆ. ಪ್ರಸ್ತುತ ನಗರಸಭೆ ಚುನಾವಣೆಯಲ್ಲಿ ಮತದಾರರು ಜಾಗೃತರಾಗಿ, ಮತಚಲಾಯಿಸಬೇಕು. ಈ ನಿಟ್ಟಿನಲ್ಲಿ ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆಯು ಮಾದರಿಯಾದ ಕಾರ್ಯಕ್ರಮವನ್ನು ಕೈಗೊಂಡಿದೆ ಎಂದು ತಿಳಿಸಿದರು.
ಕರಪತ್ರದಲ್ಲಿ ಏನಿದೆ?:- ನಿಮ್ಮಿಂದ ಆರಿಸಿ ಹೋಗುವ ಅಭ್ಯರ್ಥಿ ನಗರಸಭೆಯಲ್ಲಿ ಯಾರಿಗೂ ಹಾಗೂ ಯಾವುದಕ್ಕೂ ಶರಣಾಗದೆ ನಿರ್ಭೀತಿಯಿಂದ, ನಿಷ್ಪಕ್ಷಪಾತವಾಗಿ ಹಾಗೂ ನಿರ್ದಾಕ್ಷಿಣ್ಯದಿಂದ ಮಾತನಾಡುವ ಮತ್ತು ಕೆಲಸ ಮಾಡುವ ಶಕ್ತಿ ಹೊಂದಿದ್ದಾರೆಯೇ? ಎಂಬ ಪ್ರಧಾನ ಪ್ರಶ್ನೆಯ ಜೊತೆಗೆ ಅಭ್ಯರ್ಥಿಗೆ ನಿಮ್ಮ ಪ್ರತಿನಿಧಿಯಾಗುವ ಅರ್ಹತೆ, ಸಾಮರ್ಥ್ಯ ಇದೆಯೇ? ಅಧ್ಯರ್ಥಿಯ ಉದ್ಯೋಗ, ವಿದ್ಯಾರ್ಹತೆ, ಹಿನ್ನೆಲೆ, ಚಟುವಟಿಕೆಗಳೇನು? ಎಂಬ ಸಂಗತಿಗಳ ಬಗ್ಗೆ ಮತದಾರರು ಆಲೋಚಿಸುವಂತೆ ಈ ಕರಪತ್ರದಲ್ಲಿ ಕೋರಲಾಗಿದೆ. ಭವಿಷ್ಯದಲ್ಲಿ ಪಶ್ಚಾತ್ತಾಪ ಪಡುವ ಬದಲು ಈಗಲೇ ಮುನ್ನೆಚ್ಚರಿಕೆ ವಹಿಸಿ ಅಭ್ಯರ್ಥಿಗಳ ಜಾತಿ, ಪಕ್ಷಕ್ಕಿಂತ ಆತನ ಗುಣಲಕ್ಷಣಗಳನ್ನು ಪರಿಶೀಲಿಸಿ ಜನಪರವಾಗಿ, ನಿರ್ವಂಚನೆಯಿಂದ ಶ್ರಮಿಸುವ ಜವಾಬ್ದಾರಿಯುತ ನಡವಳಿಕೆಯುಳ್ಳ ಹಾಗೂ ಭರವಸೆಯ ಲಕ್ಷಣಗಳುಳ್ಳ ಯೋಗ್ಯ ಅಭ್ಯರ್ಥಿಗಳನ್ನು ಗುರುತಿಸಿ, ಮತನೀಡಿ ಎಂದು ಕರಪತ್ರದಲ್ಲಿ ವಿನಂತಿಸಲಾಗಿದೆ. ಇದಲ್ಲದೆ ನಾಡಿನ ಹೆಸರಾಂತ ಸಾಹಿತಿಗಳಾದ ಡಾ ಡಿ.ವಿ.ಗುಂಡಪ್ಪ, ಡಾ ಶಿವರಾಮಕಾರಂತ, ಡಾ ಹಾ.ಮ.ನಾಯಕ್, ನಿವೃತ್ತ ನ್ಯಾಯಾಧೀಶರಾದ ಡಾ ಎಂ.ರಾಮಾಜೋಯಿಸ್, ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಚಿಂತನೆಗಳನ್ನು ಮುದ್ರಿಸಲಾಗಿದ್ದು, ಈ ಕರಪತ್ರ ಮತದಾರರನ್ನು ಕ್ಷಣಕಾಲವಾದರೂ ಆಲೋಚನೆಗೆ ಪ್ರಚೋದಿಸುವಂತಿದೆ.